ರನ್ ಆಂಟನಿ ಓಟ ಶುರುವಾಯ್ತು
Posted date: 28 Thu, Apr 2016 – 11:36:05 AM

ಶ್ರೀ ವಜ್ರೇಶ್ವರಿ ಹಾಸ್ಪಿಟಾಲಿಟೀಸ್ ಲಾಂಛನದಡಿಯಲ್ಲಿ ಡಾ|| ರಾಜ್‌ಕುಮಾರ್ ಅರ್ಪಿಸಿ   ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಗುರುರಾಜ್‌ಕುಮಾರ್ ನಿರ್ಮಿಸುತ್ತಿರುವ ರನ್ ಆಂಟನಿ ಚಿತ್ರದ ಮಾತಿನ ಮರುಲೇಪನ ಕಾರ್ಯವು ಇತ್ತೀಚೆಗೆ ಆಕಾಶ್ ಸ್ಟುಡಿಯೋನಲ್ಲಿ ಮುಕ್ತಾಯಗೊಂಡಿತು.
ಚಿತ್ರಕ್ಕೆ ಮೇ ಮೊದಲ ವಾರದಲ್ಲಿ ರಿರೆಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯ ನಡೆಯಲಿದ್ದು, ಜೂನ್‌ನಲ್ಲಿ ಚಿತ್ರವು ತೆರೆಕಾಣಲಿದೆ ಎಂದು ನಟ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಹರಿಪರಾಕ್ ಸಂಭಾಷಣೆ, ಮನೋಹರ್ ಜೋಷಿ, ಕರಮ್ ಚಾವ್ಲಾ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಮಣಿಕಾಂತ್ ಕದ್ರಿ ಸಂಗೀತ, ಹರ್ಷ, ಮುರುಳಿ, ಇಮ್ರಾನ್ ನೃತ್ಯ, ಮಾಸ್‌ಮಾದ, ಡಿಫರೆಂಟ್ ಡ್ಯಾನಿ ಸಾಹಸ, ಮಲ್ಲಿಕಾರ್ಜುನ್ ನಿರ್ಮಾಣ ನಿರ್ವಹಣೆ, ಚನ್ನ ನಿರ್ಮಾಣ ಮೇಲ್ವಿಚಾರಣೆ, ಹಸಿಮ್‌ಖಾನ್, ಹಿಷಮ್‌ಖಾನ್ ಸಂಕಲನ ಚಂದನ್ ನಿರ್ದೇಶನ ಸಹಕಾರ ಎಸ್.ಕೆ. ಸಂತೋಷ್ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ರಘುಶಾಸ್ತ್ರಿ.
ತಾರಾಗಣದಲ್ಲಿ ವಿನಯ್‌ರಾಜ್‌ಕುಮಾರ್, ರುಕ್ಷರ್‌ಮೀರ್, ಸುಶ್ಮಿತಾ ಜೋಷಿ, ದೇವರಾಜ್, ಬುಲೆಟ್ ಪ್ರಕಾಶ್, ಶ್ರೀಧರ್ ಕೆ.ಎಸ್. ಶಿವಾಜಿರಾವ್ ಜಾಧವ್ ಮುಂತಾದವರಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed